ಸುದ್ದಿ ಲೋಕ


                                                                                                        ದೇಲಂಪಾಡಿ : ಮಾರ್ಚ್ 10, 2019     

ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ 
ವರ್ಷಾವಧಿ ಪ್ರತಿಷ್ಠಾ ಮಹೋತ್ಸವ 
        ವರ್ಷಂಪ್ರತಿ ನಡೆಯುವಂತೆ ಈ ವರ್ಷವೂ ಮಾರ್ಚ್ ೨೨ನೇ ತಾರೀಖಿನಂದು ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ 23 ನೇ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಮೊಕ್ತೇಸರರಾದ ಶ್ರೀಯುತ ದೇಲಂಪಾಡಿ ರಾಮ್ ಭಟ್ ರವರು ಪ್ರಕಟಣೆಯೊಂದರಲ್ಲಿ ತಿಳಿಸಿದ್ದಾರೆ.  
       
        ಈ ವರ್ಷವೂ ಊರ ಮತ್ತು ಪರವೂರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಆ ದಿನ ಆಗಮಿಸುವ ಎಲ್ಲ ಭಕ್ತಾದಿಗಳಿಗೆ ಸಕಲ ವ್ಯವಸ್ಥೆಯನ್ನು ಮಾಡಲಾಗುವುದೆಂದು  ಮೊಕ್ತೇಸರರು ತಿಳಿಸಿದ್ದಾರೆ.




   




ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ



ಪುಣ್ಯ ಕ್ಷೇತ್ರ ದೇಲಂಪಾಡಿಯ

 ಶ್ರೀ ಮಹಾಲಿಂಗೇಶ್ವರ  

ನಿನ್ನ ಚರಣಕೆ ಬಾಗಿ ಭಜಿಸುವೆ
ನಿನ್ನ ಸ್ಮರಣೆಯ ದಿನವು ಮಾಡುವೆ
ನಿನ್ನ ಕಾಣಲು ನಿರುತ ತಪಿಸುವೆ
ನಮ್ಮ ಕಾಪಿಡೊ ಮಹಾಲಿಂಗೇಶನೆ  

ದೇಲಂಪಾಡಿಯು ನಿನ್ನ ದಯದಿ
ಆಗಿದೇ ಸುಕ್ಷೇತ್ರವು
ಭಕ್ತ ಜನರಿಗೆ ನಿನ್ನ ಮಹಿಮೆಯು
ತೆರೆದಿದೆ ಹೆಬ್ಬಾಗಿಲು

ನಿನ್ನ ದಯವೇ ಎಮಗೆ ಕಾವಲು
ನಿನ್ನ ಕರುಣೆಯು ಕಾಯಲೆಮ್ಮನು
ದೇಲಂಪಾಡಿಯ ರುದ್ರನೆ
ಮಹಾದೇವನೇ ಶಿವನೆ

ಸುಲಭ ಭಕ್ತಿಗೆ ಭಕ್ತಗೊಲಿಯುವೆ
ವರವ ನೀಡುತ ಸತತ ಕಾಯುವೆ
ನಿನ್ನ ನಂಬಿದ ಭಕ್ತ ಜನರಿಗೆ
ಮುಕ್ತಿಯನು ಪರಿಪಾಲಿಪೆ




2 comments: